ಜಪಾನ್ ರಾಜಧಾನಿಗೆ ಅಪ್ಪಳಿಸಲಿದೆ ಹಗಿಬಿಸ್ ಚಂಡಮಾರುತ

ಜಪಾನ್ ರಾಜಧಾನಿಗೆ ಅಪ್ಪಳಿಸಲಿದೆ ಹಗಿಬಿಸ್ ಚಂಡಮಾರುತ

HSA   ¦    Oct 12, 2019 05:51:44 PM (IST)
ಜಪಾನ್ ರಾಜಧಾನಿಗೆ ಅಪ್ಪಳಿಸಲಿದೆ ಹಗಿಬಿಸ್ ಚಂಡಮಾರುತ

ಟೋಕಿಯೊ: ಜಪಾನ್ ರಾಜಧಾನಿ ಟೋಕಿಯೊ ಸಹಿತ ಹಲವಾರು ಪ್ರದೇಶಗಳಲ್ಲಿ ಹಗಿಬಿಸ್ ಚಂಡಮಾರುತದ ಪರಿಣಾಮ ಭಾರೀ ಮಳೆಯಾಗಿದೆ.

ಶನಿವಾರ ರಾತ್ರಿ ವೇಳೆ ಟೋಕಿಯೋ ನಗರಕ್ಕೆ ಚಂಡಮಾರುತ ಅಪ್ಪಳಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಟೋಕಿಯೋ, ಸೈತಮಾ ಮುಂತಾದ ಕಡೆಗಳಲ್ಲಿ ರೆಡ್ ಅಲರ್ಟ್ ಜಾರಿಗೊಳಿಸಲಾಗಿದೆ.

ಹವಾಮಾನ ಇಲಾಖೆಯ ಪ್ರಕಾರ ಹಗಿಬಿಸ್ ಚಂಡಮಾರುತವು ಗಂಟೆಗೆ 195 ಕಿ.ಮೀ. ವೇಗದಲ್ಲಿ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಿದೆ.