ಗುಜರಾತ್ ನಲ್ಲಿ ಐದು ಪಾಕಿಸ್ತಾನಿ ಬೋಟ್ ಗಳ ವಶ

ಗುಜರಾತ್ ನಲ್ಲಿ ಐದು ಪಾಕಿಸ್ತಾನಿ ಬೋಟ್ ಗಳ ವಶ

HSA   ¦    Oct 12, 2019 06:42:28 PM (IST)
ಗುಜರಾತ್ ನಲ್ಲಿ ಐದು ಪಾಕಿಸ್ತಾನಿ ಬೋಟ್ ಗಳ ವಶ

ಗಾಂಧಿನಗರ: ಗಡಿ ಭದ್ರತಾ ಪಡೆ(ಬಿಎಸ್ ಎಫ್) ಪಾಕಿಸ್ತಾನದ ಐದು ಮೀನುಗಾರಿಕಾ ಬೋಟ್ ಗಳನ್ನು ಭಾರತ-ಪಾಕ್ ಗಡಿ ಭಾಗದಲ್ಲಿರುವ ಹರಾಮಿ ನಾಲ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡಿದೆ.

ಶುಕ್ರವಾರ ರಾತ್ರಿ ಗಡಿ ಭದ್ರತಾ ಪಡೆಯವರು ಗಸ್ತು ತಿರುಗುತ್ತಿದ್ದ ವೇಳೆ ಈ ಬೋಟ್ ಗಳು ನಿಯಮ ಉಲ್ಲಂಘಿಸಿದ ಪರಿಣಾಮ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬಿಎಸ್ ಎಫ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಪ್ರದೇಶದಲ್ಲಿ ಈಗ ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದುವರೆಗೆ ಸಂಶಯಾಸ್ಪದವಾಗಿ ಕಂಡುಬಂದಿರುವಂತಹ ಯಾವುದೇ ವಸ್ತುಗಳನ್ನು ಪತ್ತೆ ಮಾಡಲಾಗಿಲ್ಲ ಎಂದು ಬಿಎಸ್ ಎಫ್ ಹೇಳಿದೆ.