ಶಂಕಿತ ಎಸ್ ಐಎಂಐ ಉಗ್ರನನ್ನು ಬಂಧಿಸಿದ ಪೊಲೀಸರು

ಶಂಕಿತ ಎಸ್ ಐಎಂಐ ಉಗ್ರನನ್ನು ಬಂಧಿಸಿದ ಪೊಲೀಸರು

YK   ¦    Oct 12, 2019 04:50:45 PM (IST)
ಶಂಕಿತ ಎಸ್ ಐಎಂಐ ಉಗ್ರನನ್ನು ಬಂಧಿಸಿದ ಪೊಲೀಸರು

ರಾಯ್ಪುರ್: ಶಂಕಿತ ಎಸ್ ಐಎಂಐ ಉಗ್ರ ಅಜಾರುದ್ಧೀನ್ ಆಲಿಯಾಸ್ ಕೆಮಿಕಲ್ ಆಲಿಯನ್ನು ಶುಕ್ರವಾರ ಛತ್ತೀಸ್ ಘರ್ ಪೊಲೀಸರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಶಂಕಿತ ಉಗ್ರ ಸೌದಿ ಅರೇಬಿಯಾದಿಂದ ಹೈದರಾಬಾದ್ ಗೆ ಬಂದಿಳಿದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಂಬ್ ಸ್ಫೋಟ ಪ್ರಕರಣದ ಆರೋಪಿಯಾಗಿರುವ ಈತ ಕಳೆದ 6 ವರ್ಷಗಳಿಂದ ತಲೆಮರೆಸಿಕೊಂಡು ಸೌದಿ ಅರೇಬಿಯಾದಲ್ಲಿ ನೆಲೆಸಿದ್ದ. ಅಲ್ಲಿ ಚಾಲಕನಾಗಿ, ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಎಂದು ಎಸ್ ಪಿ ಮಾಹಿತಿ ನೀಡಿದರು.

ವಿಮಾನ ಮುಖಾಂತರ ಅಜಾರುದ್ಧೀನ್ ಹೈದರಬಾದ್ ಗೆ ಆಗಮಿಸುತ್ತಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಛತ್ತೀಸ್ ಘರ್ ಪೊಲೀಸ್ ಹಾಗೂ ಭಯೋತ್ಪಾದಕ ನಿಗ್ರಹ ದಳ ಆರೋಪಿಯನ್ನು ವಶಕ್ಕೆ ಪಡೆಸಿದ್ದಾರೆ.

ಈತ 2013ರಲ್ಲಿ ಬಿಹಾರದ ಬೋಧಿ ವೃಕ್ಷದ ಬಳಿ ನಡೆಸಿದ ಬಾಂಬ್ ಸ್ಫೋಟದಿಂದ ಟಿಬೆಟಿಯಾನ್ ಸನ್ಯಾಸಿಗಳು ಸೇರಿದಂತೆ ಪ್ರವಾಸಿಗರು ಗಾಯಗೊಂಡಿದ್ದರು. ಅದಲ್ಲದೆ ಬೋಧಿ ವೃಕ್ಷದ ಕೆಳಗೆ ಸಿಲಿಂಡರ್ ಬಾಂಬ್ ನ್ನು ಆಳವಡಿಸಿದ್ದ. ಅದೃಷ್ಟವಶಾತ್ ಅದು ಸ್ಫೋಟಗೊಳ್ಳದೆ ದೊಡ್ಡ ಅನಾಹುತ ತಪ್ಪಿಹೋಗಿದೆ.