ಟಿ-20 ವಿಶ್ವಕಪ್ ಗೆ ಏಕದಿನ ಸರಣಿ ಮೂಲಕ ತಯಾರಿ: ರವಿಶಾಸ್ತ್ರಿ

ಟಿ-20 ವಿಶ್ವಕಪ್ ಗೆ ಏಕದಿನ ಸರಣಿ ಮೂಲಕ ತಯಾರಿ: ರವಿಶಾಸ್ತ್ರಿ

HSA   ¦    Jan 22, 2020 03:24:41 PM (IST)
ಟಿ-20 ವಿಶ್ವಕಪ್ ಗೆ ಏಕದಿನ ಸರಣಿ ಮೂಲಕ ತಯಾರಿ: ರವಿಶಾಸ್ತ್ರಿ

ನವದೆಹಲಿ: ಅಕ್ಟೋಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಮೆಂಟ್ ಗೆ ತಯಾರಿ ನಡೆಸಲು ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯನ್ನು ಬಳಸಿಕೊಳ್ಳಲಾಗುವುದು ಎಂದು ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಟಾಸ್ ಗೆ ಅಗತ್ಯಕ್ಕಿಂತ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ನಾವು ಯಾವುದೇ ವಾತಾವರಣ, ದೇಶ ಹಾಗೂ ಎದುರಾಳಿಗಳ ವಿರುದ್ಧ ಚೆನ್ನಾಗಿ ಆಡಬಲ್ಲೆವು. ಇದು ನಮ್ಮ ಗುರಿ ಮತ್ತು ಇದಕ್ಕಾಗಿ ನಾವು ರನ್ ಬೆನ್ನಟ್ಟುತ್ತಿದ್ದೇವೆ ಎಂದರು.

ಜನವರಿ 24ರಿಂದ ಆರಂಭವಾಗಲಿರುವ ಸರಣಿಯಲ್ಲಿ ಭಾರತ ಐದು ಟಿ-20, ಮೂರು ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯು ಮಾರ್ಚ್ ನಲ್ಲಿ ಆರಂಭವಾಗಲಿದೆ.