ಟೀಂ ಇಂಡಿಯಾ ಗೆಲುವಿಗೆ 204 ರನ್ ಗುರಿ

ಟೀಂ ಇಂಡಿಯಾ ಗೆಲುವಿಗೆ 204 ರನ್ ಗುರಿ

HSA   ¦    Jan 24, 2020 03:39:17 PM (IST)
ಟೀಂ ಇಂಡಿಯಾ ಗೆಲುವಿಗೆ 204 ರನ್ ಗುರಿ

ಅಕ್ಲೆಂಡ್: ಮೊದಲ ಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ನ್ಯೂಜಿಲೆಂಡ್ ನಿಗದಿತ 20 ಓವರ್ ಗಳಲ್ಲಿ 203 ರನ್ ಮಾಡಿ ಟೀಂ ಇಂಡಿಯಾ ಗೆಲುವಿಗೆ ಬೃಹತ್ ಗುರಿಯನ್ನಿಟ್ಟಿದೆ.

ಗಪ್ಟಿಲ್(30) ಮತ್ತು ಕಾಲಿನ್ ಮುನ್ರೋ(59) ಉತ್ತಮ ಜತೆಯಾಟದ ಮೂಲಕ ತಂಡಕ್ಕೆ ಭರ್ಜರಿ ಆರಂಭ ನೀಡಿದರು. ಅಂತ್ಯದಲ್ಲಿ ಕೇನ್ ವಿಲಿಯಮ್ಸನ್ ಮತ್ತು ರಾಸ್ ಟೇಲರ್ ಜೋಡಿ 28 ಎಸೆತಗಳಲ್ಲಿ ಒಟ್ಟು 61 ರನ್ ಸೂರೆಗೈದಿತು.

ವಿಲಿಯಮ್ಸನ್ 26 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 51 ರನ್ ಸಿಡಿಸದರು. ಟೇಲರ್ 27 ಎಸೆತಗಳಿಗೆ ಉತ್ತರವಾಗಿ 3 ಸಿಕ್ಸರ್ ಮತ್ತು 3 ಬೌಂಡರಿ ಸಹಿತ 54 ರನ್ ಬಾರಿಸಿದರು.