19ರ ಕೆಳಹರೆಯದ ವಿಶ್ವಕಪ್: ಭಾರತಕ್ಕೆ ಭರ್ಜರಿ ಗೆಲುವು

19ರ ಕೆಳಹರೆಯದ ವಿಶ್ವಕಪ್: ಭಾರತಕ್ಕೆ ಭರ್ಜರಿ ಗೆಲುವು

HSA   ¦    Jan 21, 2020 05:49:30 PM (IST)
19ರ ಕೆಳಹರೆಯದ ವಿಶ್ವಕಪ್: ಭಾರತಕ್ಕೆ ಭರ್ಜರಿ ಗೆಲುವು

ಬ್ಲೂಮ್ ಫೌಂಟೇನ್: 19ರ ಕೆಳಹರೆಯದ ವಿಶ್ವಕಪ್ ನ ಗ್ರೂಪ್ ಎ ಪಂದ್ಯದಲ್ಲಿ ಭಾರತ ತಂಡವು ಜಪಾನ್ ವಿರುದ್ಧ ಹತ್ತು ವಿಕೆಟ್ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.

ಫೀಲ್ಡಿಂಗ್ ಆಯ್ದುಕೊಂಡ ಭಾರತಕ್ಕೆ ರವಿ ಬಿಶ್ನೋಯಿ ನಾಲ್ಕು ವಿಕೆಟ್ ಉರುಳಿಸಿ ಜಪಾನ್ ನ್ನು ಕೇವಲ 22.5 ಓವರ್ ಗಳಲ್ಲಿ 41 ರನ್ ಗಳಿಗೆ ಆಲೌಟ್ ಮಾಡುವಲ್ಲಿ ನೆರವಾದರು. ಜಪಾನ್ ನ ಯಾವ ಆಟಗಾರ ಕೂಡ ಎರಡಂಕೆ ಮೊತ್ತ ತಲುಪಲಿಲ್ಲ. ಆರಂಭಿಕ ಶು ನೊಗೌಚಿ ಏಳು ರನ್ ಮಾಡಿರುವುದು ಜಪಾನ್ ಇನ್ನಿಂಗ್ಸ್ ನ ಗರಿಷ್ಠ ಮೊತ್ತ.

ಬಿಶ್ನೋಯಿ ನಾಲ್ಕು ವಿಕೆಟ್, ಕಾರ್ತಿಕ್ ತ್ಯಾಗಿ ಮೂರು, ಅಕ್ಷಯ್ ಸಿಂಗ್ ಮತ್ತು ವಿದ್ಯಾಧರ್ ಪಾಟೀಲ್ ಕ್ರಮವಾಗಿ ಎರಡು ಮತ್ತು ಒಂದು ವಿಕೆಟ್ ಪಡೆದರು.

ಸಣ್ಣ ಮೊತ್ತವನ್ನು ಬೆನ್ನಟ್ಟಿದ ಭಾರತವು ಯಶಸ್ವಿ ಜೈಸ್ವಾಲ್(29) ಮತ್ತು ಕುಮಾರ್ ಕುಶಗ್ರಾ(13) ನೆರವಿನಿಂದ ಕೇವಲ 4.5 ಓವರ್ ಗಳಲ್ಲಿ ಗೆಲುವು ದಾಖಲಿಸಿಕೊಂಡಿತು.