ಅಂತಾರಾಷ್ಟ್ರೀಯ ಟಿ-20 ಕ್ರಿಕೆಟಿಗೆ ವಿದಾಯ ಹೇಳಿದ ಮಿಥಾಲಿ ರಾಜ್

ಅಂತಾರಾಷ್ಟ್ರೀಯ ಟಿ-20 ಕ್ರಿಕೆಟಿಗೆ ವಿದಾಯ ಹೇಳಿದ ಮಿಥಾಲಿ ರಾಜ್

HSA   ¦    Sep 03, 2019 03:33:16 PM (IST)
ಅಂತಾರಾಷ್ಟ್ರೀಯ ಟಿ-20 ಕ್ರಿಕೆಟಿಗೆ ವಿದಾಯ ಹೇಳಿದ ಮಿಥಾಲಿ ರಾಜ್

ನವದೆಹಲಿ: ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಅವರು ಅಂತಾರಾಷ್ಟ್ರೀಯ ಟಿ-20 ಕ್ರಿಕೆಟಿಗೆ ವಿದಾಯ ಹೇಳಿದ್ದಾರೆ.

ಏಕದಿದತ್ತ ಗಮನಹರಿಸಲು ಮತ್ತು ರಾಷ್ಟ್ರಕ್ಕಾಗಿ ವಿಶ್ವಕಪ್ ಗೆಲ್ಲುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಮಿಥಾಲಿ ರಾಜ್ ಅವರು ವಿದಾಯದ ವೇಳೆ ತಿಳಿಸಿದರು.

2006ರಿಂದ ಟಿ-20ಯಲ್ಲಿ ನಾವು ದೀರ್ಘಕಾಲ ಆಡಿದ್ದೇನೆ. ಈಗ ನಿವೃತ್ತಿ ಘೋಷಿಸಲು ನಿರ್ಧಾರ ಮಾಡಿದ್ದೇನೆ. ಇನ್ನು ನನ್ನ ದೃಷ್ಟಿ 2021ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್. ದೇಶಕ್ಕಾಗಿ ವಿಶ್ವಕಪ್ ಗೆಲ್ಲುವುದು ನನ್ನ ಉದ್ದೇಶವಾಗಿದೆ ಮತ್ತು ನನ್ನ ಶ್ರೇಷ್ಠ ಪ್ರದರ್ಶನ ನೀಡಲು ಬಯಸಿದ್ದೇನೆ. ನನಗೆ ಟಿ-20ಯಲ್ಲಿ ಅವಕಾಶ ನೀಡಿದ ಬಿಸಿಸಿಐಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.