ನವದೆಹಲಿ: ಭಾರತದ ಶಟ್ಲರ್ ಕಿದಂಬಿ ಶ್ರೀಕಾಂತ್ ಅವರು ಶುಕ್ರವಾರ ಹಾಂಗ್ ಕಾಂಗ್ ಓಪನ್ ನ ಸೆಮಿಫೈನಲಿಗೆ ತಲುಪಿದ್ದಾರೆ.
ಕ್ವಾರ್ಟರ್ ಫೈನಲ್ ನಲ್ಲಿ ಐದನೇ ಶ್ರೇಯಾಂಕದ ಚೀನಾದ ಚೆನ್ ಲಾಂಗ್ ಅವರು ಗಾಯಾಳುವಾಗಿ ನಿವೃತ್ತರಾದ ಕಾರಣ ಕದಂಬಿ ಅವರು ಸೆಮಿಫೈನಲಿಗೆ ಪ್ರವೇಶಿಸಿದರು.
26ರ ಹರೆಯದ ಕಿದಂಬಿ ಮೊದಲ ಸುತ್ತಿನಲ್ಲಿ 21-13 ಗೆಲುವು ಪಡೆದರು. ಎರಡನೇ ಸುತ್ತಿನಲ್ಲಿ ಇಬ್ಬರು ಆಟಕ್ಕೆ ತಯಾರಾಗುತ್ತಿದ್ದಂತೆ ಚೀನಾದ ಆಟಗಾರ ಹೊರಗುಳಿದರು.