ಕಿವೀಸ್ ಆಟಗಾರರ ವಿರುದ್ಧ ಸೇಡು ತೀರಿಸಲು ಮನಸ್ಸು ಬರಲ್ಲ: ಕೊಹ್ಲಿ

ಕಿವೀಸ್ ಆಟಗಾರರ ವಿರುದ್ಧ ಸೇಡು ತೀರಿಸಲು ಮನಸ್ಸು ಬರಲ್ಲ: ಕೊಹ್ಲಿ

HSA   ¦    Jan 23, 2020 03:45:58 PM (IST)
ಕಿವೀಸ್ ಆಟಗಾರರ ವಿರುದ್ಧ ಸೇಡು ತೀರಿಸಲು ಮನಸ್ಸು ಬರಲ್ಲ: ಕೊಹ್ಲಿ

ಅಕ್ಲೆಂಡ್: ವಿಶ್ವಕಪ್ ಕ್ರಿಕೆಟಿನ ಸೆಮಿಫೈನಲಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲುಂಡಿರುವುದಕ್ಕೆ ಸೇಡು ತೀರಿಸುವ ಯಾವುದೇ ಇರಾದೆ ಇಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸ್ಪಷ್ಟಪಡಿಸಿದರು.

ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಶುಕ್ರವಾರದಿಂದು ಐದು ಟಿ-20 ಪಂದ್ಯಗಳ ಸರಣಿಯನ್ನು ಆಡಲಿದೆ.

ನೀವು ಸೇಡಿನ ಬಗ್ಗೆ ಆಲೋಚಿಸಿದರೆ ಈ ಹುಡುಗರು ಎಷ್ಟು ಒಳ್ಳೆಯವರು ಎಂದರೆ ಅದು ಖಂಡಿತವಾಗಿಯೂ ಸಾಧ್ಯವಿಲ್ಲ. ನಾವೆಲ್ಲರೂ ಜತೆಯಾಗಿ ಇದ್ದೇವೆ. ಇದೆಲ್ಲವೂ ಮೈದಾನದಲ್ಲಿ ನಡೆಯುವಂತಹ ಸ್ಪರ್ಧೆ ಮಾತ್ರ ಎಂದು ಅವರು ತಿಳಿಸಿದರು.

ನ್ಯೂಜಿಲೆಂಡ್ ಪ್ರತಿಯೊಂದು ಎಸೆತ ಮತ್ತು ಆಟದಿಂದ ತಮ್ಮ ಶ್ರೇಷ್ಠ ಪ್ರದರ್ಶನ ಹೊರಗೆ ತರಲು ಪ್ರಯತ್ನಿಸುತ್ತದೆ. ಅವರು ತೀವ್ರ ಹೋರಾಟ ನೀಡುವಂತೆ ಕಾಣುತ್ತಿರುವರು. ಮೈದಾನದಲ್ಲಿ ಸ್ವೀಕರಿಸಲು ಅರ್ಹವಲ್ಲದ ಯಾವುದೇ ವಿಚಾರವನ್ನು ಅವರು ಮಾಡಲ್ಲ ಎಂದರು.