ಬೈಕ್ ಗೆ ಕಾರು ಡಿಕ್ಕಿ: ಸವಾರ ಮೃತ್ಯು

ಬೈಕ್ ಗೆ ಕಾರು ಡಿಕ್ಕಿ: ಸವಾರ ಮೃತ್ಯು

SK   ¦    Oct 09, 2019 05:22:12 PM (IST)
ಬೈಕ್ ಗೆ ಕಾರು ಡಿಕ್ಕಿ: ಸವಾರ ಮೃತ್ಯು

ಕಾಸರಗೋಡು: ರಾಷ್ಟೀಯ ಹೆದ್ದಾರಿಯ ಚೌಕಿ ಕಲ್ಲಂಗೈಯಲ್ಲಿ ಬೈಕ್ -ಕಾರು ನಡುವೆ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಉಳಿಯತ್ತಡ್ಕದ ಫಯಾಜ್(20) ಮೃತಪಟ್ಟವರು. ಉಳಿಯತ್ತಡ್ಕ ಕಡೆಗೆ ತೆರಳುತ್ತಿದ್ದ ಬೈಕ್ ಮತ್ತು ಕಾಸರಗೋಡು ನಡುವೆ ಬರುತ್ತಿದ್ದ ಕಾರಿನ ನಡುವೆ ಅಪಘಾತ ನಡೆದಿದೆ.

ಗಂಭೀರ ಗಾಯಗೊಂಡ ಫಯಾಜ್ ನ್ನು ಕಾಸರಗೋಡು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಾಗಲಿಲ್ಲ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಯಿತು

ಕಾಸರಗೋಡು ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ