ಯುವ ದಸರಾ ಉದ್ಘಾಟನೆಗೆ ಪಿ ವಿ.ಸಿಂಧುಗೆ ಅಧಿಕೃತ ಆಹ್ವಾನ

ಯುವ ದಸರಾ ಉದ್ಘಾಟನೆಗೆ ಪಿ ವಿ.ಸಿಂಧುಗೆ ಅಧಿಕೃತ ಆಹ್ವಾನ

YK   ¦    Sep 15, 2019 01:10:01 PM (IST)
ಯುವ ದಸರಾ ಉದ್ಘಾಟನೆಗೆ ಪಿ ವಿ.ಸಿಂಧುಗೆ ಅಧಿಕೃತ ಆಹ್ವಾನ

ಮೈಸೂರು: ೨೦೧೯ರ ಯುವ ದಸರಾ ಉದ್ಘಾಟನೆಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರನ್ನು ಅಧಿಕೃತವಾಗಿ ಆಹ್ವಾನಿಸಲಾಗಿದೆ.

ನಾಲ್ಕು ದಿನಗಳ ಹಿಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪತ್ರ ಮುಖೇನ ಪಿ.ವಿ.ಸಿಂಧು ಅವರನ್ನು ಯುವ ದಸರಾ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು.

ಶನಿವಾರ ಸಂಸದ ಪ್ರತಾಪ್ ಸಿಂಹ ಅವರು ರಾಜ್ಯ ಸರ್ಕಾರದ ಪರವಾಗಿ ಶನಿವಾರ ಪಿವಿ ಸಿಂಧು ಅವರನ್ನು ಭೇಟಿ ಮಾಡಿ ಅಧಿಕೃತ ಆಹ್ವಾನ ನೀಡಿದ್ದಾರೆ. ಈ ಸಂಬಂಧ ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಷ್ಯಂತ್ ಅವರು ಕೂಡ ಸಾಥ್ ನೀಡಿದರು.