ತೆಂಗಿನ ಮರಕ್ಕೆಎರಗಿದ ಸಿಡಿಲು

ತೆಂಗಿನ ಮರಕ್ಕೆಎರಗಿದ ಸಿಡಿಲು

DA   ¦    Oct 09, 2019 09:42:04 AM (IST)
ತೆಂಗಿನ ಮರಕ್ಕೆಎರಗಿದ ಸಿಡಿಲು

ಬೆಳ್ತಂಗಡಿ: ಭಾರೀ ಸಿಡಿಲೊಂದು ಬಡಿದು ತೆಂಗಿನಮರ ಸುಟ್ಟಿರುವ ಘಟನೆ ಇಲ್ಲಿನ ಸನಿಹದ ಪೆಟ್ರೋಲ್ ಪಂಪ್‍ನ ಬಳಿ ಮಂಗಳವಾರ ನಡೆದಿದೆ.

ಸಂಜೆ 3ರ ಬಳಿಕ ಏಕಾಏಕಿ ಮಳೆ ಸಿಡಿಲು ಮಿಂಚು ಆವರಿಸಿತ್ತು. ಸುಮಾರು 4 ಗಂಟೆ ಸಮಯಕ್ಕೆ ಸಿಡಿಲು ತೆಂಗಿನ ಮರಕ್ಕೆ ಬಡಿದ ಪರಿಣಾಮ ಬೆಂಕಿ ಕೆನ್ನಾಲಿಗೆ ಹೊತ್ತಿ ಉರಿದಿತ್ತು. ಸಮೀಪದಲ್ಲೆ ಪೆಟ್ರೋಲ್ ಬಂಕ್ ಇದ್ದು ಸ್ಥಳದಲ್ಲಿದ್ದವರಿಗೆ ವಿದ್ಯುತ್ ಸ್ಪರ್ಶದ ಅನುಭವವಾಗಿದೆ. ಪೆಟ್ರೋಲ್ ಬಂಕ್ ಪಂಪ್ ಕೈಕೊಟ್ಟಿದ್ದರಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಮಳೆ ಹೆಚ್ಚಾದ್ದರಿಂದ ಬೆಂಕಿ ತನ್ನಿಂತಾನೆ ಆರಿದೆ. ತಾಲೂಕಿನ ಕಾಯರ್ತಡ್ಕ ಸೇರಿದಂತೆ ಕೆಲ ಪ್ರದೇಶಗಳಲ್ಲಿ ನೀರು ನಿಂತಿದ್ದರಿಂದ ರಸ್ತೆ ಜಲಾವೃತವಾಗಿತ್ತು. ಸಂಜೆಯಾಗುತ್ತಲೆ ಸಿಡಿಲು ಗುಡುಗು ಹೆಚ್ಚಾಗಿತ್ತು.

ಕಳೆದ ಒಂದು ವಾರದಿಂದೀಚೆಗೆ ತಾಲೂಕಿನಲ್ಲಿ ಬೆಳಗಿನಿಂದ ಸಂಜೆಯವರೆಗೆ ಬಿಸಿಲಿನ ಧಗೆ ಬಳಿಕ ಘನಘೋರ ಸಿಡಿಲು ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿರುವುದು ಮಾಮೂಲಾಗಿದೆ.