ವಿದ್ಯಾರ್ಥಿನಿಯರು ಮೆನುಸ್ಟ್ರಲ್ ಕಪ್ ನ್ನು ಹೆಚ್ಚಾಗಿ ಬಳಸಬೇಕು: ಡಾ. ಹನಾ ಶೆಟ್ಟಿ

ವಿದ್ಯಾರ್ಥಿನಿಯರು ಮೆನುಸ್ಟ್ರಲ್ ಕಪ್ ನ್ನು ಹೆಚ್ಚಾಗಿ ಬಳಸಬೇಕು: ಡಾ. ಹನಾ ಶೆಟ್ಟಿ

Oct 04, 2019 03:21:33 PM (IST)
ವಿದ್ಯಾರ್ಥಿನಿಯರು ಮೆನುಸ್ಟ್ರಲ್ ಕಪ್ ನ್ನು ಹೆಚ್ಚಾಗಿ ಬಳಸಬೇಕು: ಡಾ. ಹನಾ ಶೆಟ್ಟಿ

ವಿದ್ಯಾಗಿರಿ: ಪರಿಸರ ಸ್ನೇಹಿ ಹಾಗೂ ಕಡಿಮೆ ಖರ್ಚಿನ ಮೆನುಸ್ಟ್ರುವಲ್ ಕಪ್‍ಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿದ್ಯಾರ್ಥಿನಿಯರು ಅವುಗಳನ್ನು ಹೆಚ್ಚು ಬಳಸಬೇಕು ಎಂದು  ಆಳ್ವಾಸ್ ಹೆಲ್ತ್ ಸೆಂಟರ್ ಸ್ತ್ರೀತಜ್ಞೆ ಡಾ. ಹನಾ ಶೆಟ್ಟಿ ಹೇಳಿದರು.

ಅವರು ಕಾಲೇಜಿನ ವುಮನ್ ಡೆವೆಲಪ್‍ಮೆಂಟ್ ಸೆಲ್‍ವತಿಯಿಂದ ‘ಮೆನುಸ್ಟ್ರುವಲ್ ಕಪ್ ಬಳಕೆಯ ಕುರಿತು ಜಾಗೃತಿ ಕಾರ್ಯಗಾರ’ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ  ಮಾತನಾಡಿದರು.

ಸಾಮಾನ್ಯವಾಗಿ ಸ್ಯಾನಿಟರಿ ಪ್ಯಾಡ್‍ಗಳು ದುಬಾರಿಯಾಗಿದ್ದು, ಅಲ್ಲದೆ ಇವುಗಳ ತ್ಯಾಜ್ಯಕ್ಕೆ ಸರಿಯಾದ ಪರಿಹಾರವಿಲ್ಲ. ಸ್ಯಾನಿಟರಿ ಪ್ಯಾಡ್‍ಗಳಿಂದ ಅಲರ್ಜಿ, ತುರಿಕೆ, ಕ್ಯಾನ್ಸರ್ ನಂತಹ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಮಾತ್ರವಲ್ಲದೆ ಇದರ ತಾಜ್ಯದಿಂದ ಮಲಿನತೆಯೂ ಹೆಚ್ಚುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಸ್ಮಿತ ಭಟ್, ಡಾ. ಎಂ. ಗನಪ್ರಿಯ ದೇವಿ, ಡಾ. ಅಂಜಲಿ ಎಸ್, ಜೆನಿಫರ್ ಸಲಿಸ್ ಉಪಸ್ಥಿತರಿದ್ದರು. ಚೈತ್ರ ಕಾರ್ಯಕ್ರಮವನ್ನು ನಿರೂಪಿಸಿ, ದಿಶಾ ಶೆಟ್ಟಿ ವಂದಿಸಿದರು.