ರಂಗಕಲಾ ಸ್ಪರ್ಧೆ-ರಂಗೋತ್ಸವ ಪ್ರಶಸ್ತಿ: 12ನೇ ಬಾರಿ ಆಳ್ವಾಸ್ ಮುಡಿಗೆ

ರಂಗಕಲಾ ಸ್ಪರ್ಧೆ-ರಂಗೋತ್ಸವ ಪ್ರಶಸ್ತಿ: 12ನೇ ಬಾರಿ ಆಳ್ವಾಸ್ ಮುಡಿಗೆ

DSK   ¦    Aug 22, 2019 10:59:03 AM (IST)
ರಂಗಕಲಾ ಸ್ಪರ್ಧೆ-ರಂಗೋತ್ಸವ ಪ್ರಶಸ್ತಿ: 12ನೇ ಬಾರಿ ಆಳ್ವಾಸ್ ಮುಡಿಗೆ

ವಿದ್ಯಾಗಿರಿ: ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ ಹಾಗೂ ಕುಂದಾಪುರ ಭಂಡಾರ್‍ಕರ್ಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ನಡೆದ `ರಂಗಕಲಾ ಸ್ಪರ್ಧೆ-ರಂಗೋತ್ಸವ 2019'ಯಲ್ಲಿ ಆಳ್ವಾಸ್ ಕಾಲೇಜು ಸತತವಾಗಿ 12ನೇ ಬಾರಿಗೆ ಸಮಗ್ರ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ವಿದ್ಯಾರ್ಥಿಗಳಿಗಾಗಿ ಅನೇಕ ರಂಗ ಕಲಾ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಮೈಮ್ ಪ್ರದರ್ಶನದಲ್ಲಿ ಪ್ರಥಮ, ಮಿಮಿಕ್ರಿಯಲ್ಲಿ ದ್ವಿತೀಯ ಬಹುಮಾನ, ಕಿರು ಪ್ರಹಸನದಲ್ಲಿ ದ್ವಿತೀಯ ಹಾಗೂ ನಾಟಕಕ್ಕೆ ತೃತೀಯ ಬಹುಮಾನವನ್ನು ಪಡೆದುಕೊಂಡಿದೆ. ಆಳ್ವಾಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಜೀವನ್‍ರಾಮ್ ಸುಳ್ಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯ ಡಾ. ಕುರಿಯನ್ ಶ್ಲಾಘಿಸಿದ್ದಾರೆ.