ಬಿಬಿಎಂಪಿ ಕಮಿಷನರ್ ಆಗಿ ಗೌರವ್ ಗುಪ್ತಾ ನೇಮಕ

ಬಿಬಿಎಂಪಿ ಕಮಿಷನರ್ ಆಗಿ ಗೌರವ್ ಗುಪ್ತಾ ನೇಮಕ

HSA   ¦    Feb 13, 2020 06:02:18 PM (IST)
ಬಿಬಿಎಂಪಿ ಕಮಿಷನರ್ ಆಗಿ ಗೌರವ್ ಗುಪ್ತಾ ನೇಮಕ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ನೂತನ ಕಮಿಷನರ್ ಆಗಿ ಗೌರವ್ ಗುಪ್ತಾ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ.

ಇವರು ಬಿಎಚ್ ಅನಿಲ್ ಕುಮಾರ್ ಅವರ ಜಾಗದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಬಿಬಿಎಂಪಿಯ ಕಮಿಷನರ್ ಅವರನ್ನು ಹಠಾತ್ ಆಗಿ ಬದಲಾವಣೆ ಮಾಡಿರುವುದಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ.

ರಾಮರೆಡ್ಡಿ ಅವರನ್ನು ಉನ್ನತ ಶಿಕ್ಷಣ ಇಲಾಖೆಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆಗಿ ನೇಮಕ ಮಾಡಲಾಗಿದೆ.