ಬೆಂಗಳೂರಿನೆ ಕ್ಲಬ್ ಗಳ ಮೇಲೆ ಸಿಸಿಬಿ ದಾಳಿ: ೩೯ಮಂದಿಯ ಬಂಧನ

ಬೆಂಗಳೂರಿನೆ ಕ್ಲಬ್ ಗಳ ಮೇಲೆ ಸಿಸಿಬಿ ದಾಳಿ: ೩೯ಮಂದಿಯ ಬಂಧನ

YK   ¦    Sep 15, 2019 11:10:25 AM (IST)
ಬೆಂಗಳೂರಿನೆ ಕ್ಲಬ್ ಗಳ ಮೇಲೆ ಸಿಸಿಬಿ ದಾಳಿ: ೩೯ಮಂದಿಯ ಬಂಧನ

ಬೆಂಗಳೂರು: ಶುಕ್ರವಾರ ನಗರದ ‘ಮಾಸ್ ರಾಯಲ್’, ‘ಸಿಂಚನ’ ರಿಕ್ರಿಯೇಷನ್ ಅಸೋಸಿಯೇಷನ್ ಕ್ಲಬ್‌ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 39 ಮಂದಿಯನ್ನು ಬಂಧಿಸಿ, ₹ 1.17 ಲಕ್ಷ ಜಪ್ತಿ ಮಾಡಿದ್ದಾರೆ.

ಫ್ರೇಜರ್ ಟೌನ್‌ನಲ್ಲಿರುವ ಮಾಸ್‌ ರಾಯಲ್‌ ಕ್ಲಬ್‌, ಅರಕೆರೆ ಬಳಿಯ ಸಿಂಚನ ಕ್ಲಬ್‌ನಲ್ಲಿ ಸದಸ್ಯರಲ್ಲದ ವ್ಯಕ್ತಿಗಳು, ಹಣ ಪಣಕ್ಕಿಟ್ಟು ಜೂಜು ಆಡುತ್ತಿದ್ದರು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕ್ಲಬ್ ಗಳು ಪರವಾನಗಿ ನಿಯಮ ಉಲ್ಲಂಘಿಸಿ ನಡೆಸುತ್ತಿದ್ದ ಹಿನ್ನೆಲೆ ದೂರು ಬಂದಿದ್ದು, ಅಂಥಹ ಕ್ಲಬ್ ಗಳ ಮೇಲೆ ನಿಗಾ ವಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದರು.