ಅನಾರೋಗ್ಯ: ಆಸ್ಪತ್ರೆಗೆ ದಾಖಲಾದ ಡಿಕೆ ಶಿವಕುಮಾರ್

ಅನಾರೋಗ್ಯ: ಆಸ್ಪತ್ರೆಗೆ ದಾಖಲಾದ ಡಿಕೆ ಶಿವಕುಮಾರ್

YK   ¦    Sep 15, 2019 10:00:57 AM (IST)
ಅನಾರೋಗ್ಯ: ಆಸ್ಪತ್ರೆಗೆ ದಾಖಲಾದ ಡಿಕೆ ಶಿವಕುಮಾರ್

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಸಂಬಂಧ ಇಡಿ ಕಸ್ಟಡಿಯಲ್ಲಿರುವ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಆರೋಗ್ಯ ಹದಗೆಟ್ಟಿದ್ದರಿಂಧ ಶನಿವಾರ ನವದೆಹಲಿಯ ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಿಗ್ಗೆ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದ ವೇಳೆ ಡಿಕೆಶಿ ಅವರ ರಕ್ತದೊತ್ತಡದಲ್ಲಿ ಏರುಪೇರಾಗಿ ಕಂಡಿದಬಂದಿದೆ.. ಅದಲ್ಲದೆ ಜ್ವರದಿಂದ ಬಳಲುತ್ತಿದ್ದರು.

ಹೀಗಾಗಿ ತಪಾಸಣೆಗಾಗಿ ಆಸ್ಪತ್ರೆಗೆ ಅಧಿಕಾರಿಗಳು ಕರೆದೊಯ್ದಿದ್ದು, ವೈದ್ಯರ ಸಲಹೆಯಂತೆ ದಾಖಲಿಲಸಾಗಿದೆ.