ಮನೆಯಲ್ಲೇ ಮಾಡಿ ಹೋಟೆಲ್ ರೀತಿಯ ಬಂಗುಡೆ ತವಾ ಫ್ರೈ

ಮನೆಯಲ್ಲೇ ಮಾಡಿ ಹೋಟೆಲ್ ರೀತಿಯ ಬಂಗುಡೆ ತವಾ ಫ್ರೈ

YK   ¦    Oct 10, 2019 03:20:40 PM (IST)
ಮನೆಯಲ್ಲೇ ಮಾಡಿ ಹೋಟೆಲ್ ರೀತಿಯ ಬಂಗುಡೆ ತವಾ ಫ್ರೈ

ಮನೆಯಲ್ಲೀ ಎಷ್ಟೇ ರುಚಿಕರವಾಗಿ ಅಡುಗೆ ತಯಾರಿಸಿದರು ಕೆಲವೊಂದು ಬಾರಿ ಹೋಟೆಲ್ ನ ಖಾದ್ಯಗಳು ಬಾಯಿಗೆ ರುಚಿಕರ ಎನಿಸುತ್ತದೆ. ಇಂತಹ ಖಾದ್ಯಗಳನ್ನು ಗೃಹಿಣಿಯರು ಮನೆಯಲ್ಲೇ ತಯಾರಿಸಲು ಹಿಂದೆ ಸರಿಯುತ್ತಾರೆ. ಅದರಲ್ಲಿ ಮೀನಿನ ತವಾ ಫ್ರೈ ಕೂಡಾ.ಬಂಗುಡೆ ತವಾ ಫ್ರೈ ಅನ್ನು ಮನೆಯಲ್ಲಿಯೇ ಸುಲಭವಾಗಿ ರುಚಿಕರವಾಗಿ ತಯಾರಿಸಬಹುದು.

 

ಬೇಕಾಗುವ ಸಾಮಾಗ್ರಿಗಳು:

ಮೆಣಸು- ೮-೧೦

ಜೀರಿಗೆ-೧/೨ಚಮಚ

ಹುಣಸೆ ಹಣ್ಣು ಈ ಎಲ್ಲ ಮಿಶ್ರಣವನ್ನು ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ನಂತರ ಈ ಮಿಶ್ರಣಕ್ಕೆ ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಅರಿಶಿಣ ಹಾಗೂ ಉಪ್ಪು ಸೇರಿಸಿ ಹದವಾಗಿ ಕಲಸಿ. ಈ ಮಿಶ್ರಣದಲ್ಲಿ ಬಂಗುಡೆ ಮೀನನ್ನು ೧/೨ ಗಂಟೆ ನೆನೆಸಿ. ನಂತರ ಕಾದ ತವಾಕ್ಕೆ ತೆಂಗಿನ ಎಣ್ಣೆ ಹಾಕಿ ಮೀನನ್ನು ಸಣ್ಣ ಉರಿಯಲ್ಲಿ ೧೦ ನಿಮಿಷ ಚೆನ್ನಾಗಿ ಕಾಯಿಸಿ. ಇದೀಗ ರುಚಿಕರವಾಗಿರುವ ಆರೋಗ್ಯಕರವಾದ ಬಂಗುಡೆ ತವಾ ಫ್ರೈ ಸವಿಯಲು ಸಿದ್ಧ.