ಚೀಸ್ ಬಾಲ್ ತಯಾರಿಸಿಕೊಂಡು ಸವಿಯಿರಿ

ಚೀಸ್ ಬಾಲ್ ತಯಾರಿಸಿಕೊಂಡು ಸವಿಯಿರಿ

HSA   ¦    Feb 12, 2020 04:17:52 PM (IST)
ಚೀಸ್ ಬಾಲ್ ತಯಾರಿಸಿಕೊಂಡು ಸವಿಯಿರಿ

ತುಂಬಾ ರುಚಿಕರವಾದ ತಿಂಡಿಯು ಸಂಜೆ ಚಾದ ಜತೆಗೆ ಸವಿಯಲು ಸಿಕ್ಕಿದರೆ ಆ ದಿನದ ಒಳ್ಳೆಯ ರೀತಿ ಕೊನೆಗೊಳ್ಳುವುದು ಎಂದರ್ಥ. ಹೀಗಾಗಿ ನೀವು ಸಂಜೆ ವೇಳೆ ಮಾಡಬಹುದಾದ ಚೀಸ್ ಬಾಲ್ ಬಗ್ಗೆ ನಾವಿಲ್ಲಿ ತಿಳಿಸಿಕೊಡಲಿದ್ದೇವೆ.

 

ಬೇಕಾಗುವ ಸಾಮಗ್ರಿಗಳು

250 ಗ್ರಾಂ ಬಟಾಟೆ

1 ಚಮ ಬೆಳ್ಳುಳ್ಳಿ ಪೇಸ್ಟ್ ಅಥವಾ ಹುಡಿ

ಸ್ವಲ್ಪ ಉಪ್ಪು

½-3/4 ಚಮಚ ಮೆಣಸಿನ ಬೀಜ

1/8 ರಿಂದ ¼ ಚಮಚ ಕರಿಮೆಣಸಿನ ಹುಡಿ

6 ಚಮಚ ಬ್ರೆಡ್ ತುಂಡುಗಳು

2 ಚಮಚ ಕೊತ್ತಂಬರಿ ಎಲೆಗಳು

ಕರಿಯಲು ಎಣ್ಣೆ

 

ಮಸಾಲೆ ತಯಾರಿಸಲು

80-100 ಗ್ರಾಂ ಚೀಸ್

1/4ರಿಂದ1/2 ಚಮಚ ಮೆಣಸಿನ ಬೀಜ

1/8ರಿಂದ ¼ ಚಮಚ ಕರಿಮೆಣಸಿನ ಹುಡಿ

½ ಗರಂ ಮಸಾಲ

 

ಚೀಸ್ ಬಾಲ್ ತಯಾರಿಕೆಗೆ

2 ಚಮಚ ಜೋಳದ ಹಿಟ್ಟು

ಒಂದು ಮೊಟ್ಟೆ

½ ಕಪ್ ಬ್ರೆಡ್ ತುಂಡುಗಳು

 

ತಯಾರಿಸುವುದು ಹೇಗೆ

ಸಿಪ್ಪೆಯ ಜತೆಗೆ ಬಟಾಟೆ ಸರಿಯಾಗಿ ಬೇಯಿಸಿ

ಸಿಪ್ಪೆ ತೆಗೆದು ಅದನ್ನು ಸರಿಯಾಗಿ ಹುಡಿ ಮಾಡಿಕೊಳ್ಳಿ.

ಇದಕ್ಕೆ ಬೆಳ್ಳುಳ್ಳಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಉಪ್ಪು, ಮೆಣಸಿನ ಬೀಜಗಳು, ಕರಿಮೆಣಸಿನ ಹುಡಿ ಮತ್ತು ಬ್ರೆಡ್ ತುಂಡುಗಳು.

ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿ ಉಂಡೆ ಮಾಡಿಕೊಳ್ಳಿ.

8-10 ಒಂದೇ ರೀತಿಯ ಉಂಡೆ ಮಾಡಿಕೊಳ್ಳಿ.

ಚೀಸ್ ನ್ನು ½ ಇಂಚಿನ ತುಂಡುಗಳನ್ನಾಗಿ ಮಾಡಿ.

ಇದಕ್ಕೆ ಮೆಣಸಿನ ಬೀಜ, ಕರಿಮೆಣಸಿನ ಹುಡಿ ಮತ್ತು ಗರಂ ಮಸಾಲೆ ಹಾಕಿ. ಎಲ್ಲವನ್ನು ಸರಿಯಾಗಿ  ಮಿಶ್ರಣ ಮಾಡಿ ಬದಿಗಿಟ್ಟುಕೊಳ್ಳಿ.

 

ಚೀಸ್ ಬಾಲ್ ತಯಾರಿ ಹೇಗೆ?

ಬಟಾಟೆ ಉಂಡೆಯನ್ನು ಅಂಗೈ ಮೇಲೆ ಹಾಕಿ ಅದ್ನು ಹಡಿಕೊಳ್ಳಿ. ಇದರಲ್ಲಿ ಚೀಸ್ ತುಂಡನ್ನು ಇಡಿ.

ಈಗ ಇದನ್ನು ಮುದ್ದೆ ಮಾಡಿಕೊಂಡು ಚೆಂಡಿನಾಕೃತಿ ಮಾಡಿ. ಇದು ಒಡೆಯದೆ ಇರುವಂತೆ ಗಮನಹರಿಸಿ.

ಇನ್ನೊಂದು ಪ್ಲೇಟ್ ಗೆ 2 ಚಮಚ ಜೋಳದ ಹಿಟ್ಟು ಹಾಕಿ ಹರಡಿ.

ಈಗ ತಯಾರಿಸಿಕೊಂಡ ಚೀಸ್ ಬಾಲ್ ನ್ನು ಇದರಲ್ಲಿ ಅದ್ದಿಕೊಳ್ಳಿ.

 

ಇದನ್ನು ಕರಿಯುವುದು ಹೇಗೆ?

ಬಾಣಲೆಗೆ ಎಣ್ಣೆ ಹಾಕಿ ಮತ್ತು ಅದನ್ನು ಕುದಿಸಿ.

ಎಣ್ಣೆ ಬಿಸಿಯಾಗಿದೆಯಾ ಎಂದು ತಿಳಿಯಲು ನೀವು ಇದರಲ್ಲಿ ಒಂದು ತುಂಡು ಬಟಾಟೆ ಮಸಾಲೆ ಹಾಕಿ ನೀಡಿ. ಆಗ ಅದು ತಕ್ಷಣವೇ ಕಂದು ಬಣ್ಣಕ್ಕೆ ಬರುವುದು.

ಬೆಂಕಿಯನ್ನು ಮಧ್ಯಮ ಪ್ರಮಾಣದಲ್ಲಿ ಇಡಿ. ಇದರ ಬಳಿಕ ಒಂದೊಂದೇ ಚೀಸ್ ಬಾಲ್ ನ್ನು ಕರಿಯಿರಿ.

ಇದು ಬಂಗಾರದ ಬಣ್ಣಕ್ಕೆ ಬರುವ ತನಕ ಕರಿಯಿರಿ.

ಸಾಸ್ ನೊಂದಿಗೆ ಚೀಸ್ ಬಾಲ್ ರುಚಿ ನೋಡಿ.