ಚಿಕನ್ ಸುಕ್ಕ ಹೀಗೂ ಮಾಡಬಹುದು

ಚಿಕನ್ ಸುಕ್ಕ ಹೀಗೂ ಮಾಡಬಹುದು

Jan 15, 2020 01:10:56 PM (IST)
ಚಿಕನ್ ಸುಕ್ಕ ಹೀಗೂ ಮಾಡಬಹುದು

ಕರಾವಳಿಯ ಪ್ರಸಿದ್ಧ ಪದಾರ್ಥಗಳಲ್ಲಿ ಚಿಕನ್ ಸುಕ್ಕ ಕೂಡ ಒಂದು. ಹೆಚ್ಚಿನ ಮಾಂಸಹಾರಿ ಅಡುಗೆಗಳಲ್ಲಿ ಚಿಕನ್ ಸುಕ್ಕಗೆ ಹೆಚ್ಚಿನ ಪ್ರಾಧನ್ಯತೆಯನ್ನು ನೀಡುತ್ತಾರೆ. ಇನ್ನೂ ಮನೆ ಅಡುಗೆಗಳಲ್ಲಿಯೂ ಈ ರೆಸಿಪಿಯನ್ನು ಹೆಚ್ಚಾಗಿ ಮಾಡುತ್ತಾರೆ. ಚಿಕನ್ ಸುಕ್ಕದ ಜತೆಗೆ ಊಟ, ರೊಟ್ಟಿ ಹಾಗೂ ಚಪಾತಿಯನ್ನು ಸವಿ ಬಹುದು.
ಚಿಕನ್ ಸುಕ್ಕ ಮಾಡಲು ಬೇಕಾಗುವ ಸಾಮಾಗ್ರಿಗಳು

ಚಿಕ್ಕದಾಗಿ ಕತ್ತರಿಸಿಕೊಂಡ 1 ಕೆ.ಜಿ. ಚಿಕನ್
1 ಈರುಳ್ಳಿ
2 ಏಲಕ್ಕಿ
1 ಟೀ ಚಮಚ ಉಪ್ಪು
2 ಟೀ ಚಮಚ ಎಣ್ಣೆ

ಮಸಾಲ ಮಾಡಲು ಬೇಕಾಗುವ ಸಾಮಾಗ್ರಿಗಳು:
2 ಟೀ ಚಮಚ ಕೊತ್ತಂಬರಿ
1/4 ಟೀ ಚಮಚ ಜೀರಿಗೆ
1/4 ಟೀ ಚಮಚ ಸಾಸಿವೆ
1/2 ಟೀ ಚಮಚ ಕರಿ ಮೆಣಸು
4 ಲವಂಗ
10 ಬ್ಯಾಡಗಿ ಮೆಣಸಿನಕಾಯಿ
6 ಕಾಶ್ಮೀರಿ ಮೆಣಸಿನಕಾಯಿ
1/4 ಟೀ ಚಮಚ ಹರಿಸಿನ ಪುಡಿ
1 ಈರುಳ್ಳಿ
4-5 ಬೆಳ್ಳುಳ್ಳಿ
1 ಶುಂಠಿ
1 ಟೀ ಚಮಚ ಉಪ್ಪು

ಮಾಡುವ ವಿಧಾನ:
ಬ್ಯಾಡಗಿ ಹಾಗೂ ಕಾಶ್ಮೀರಿ ಮೆಣಸಿನ ಕಾಯಿಯನ್ನು ಸ್ವಲ್ಪ ಹುರಿದು ಪಕ್ಕದಲ್ಲಿ ಇಟ್ಟುಕೊಳ್ಳಿ. ಅದೇ ಬಾಣಲೆಯಲ್ಲಿ ಕೊತ್ತಂಬರಿ, ಜೀರಿಗೆ, ಸಾಸಿವೆ, ಕರಿ ಮೆಣಸು, ಲವಂಗ, ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಹುರಿಯಿರಿ. ಇದೀಗ ಹುರಿದಿಟ್ಟುಕೊಂಡ ಎಲ್ಲ ಸಾಮಾಗ್ರಿಗಳ ಜತೆಗೆ ಹುಳಿ, ಹರಿಸಿನ ಪುಡಿ ಹಾಕಿ ಸ್ವಲ್ಪ ನೀರು ಹಾಕಿ ಗ್ರೈಂಡ್ ಮಾಡಿಟ್ಟುಕೊಳ್ಳಿ. ತೆಂಗಿನಕಾಯಿ ತುರಿಗೆ ಸ್ವಲ್ಪ ನೀರು ಹಾಕಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ.

ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಕಟ್ ಮಾಡಿ ಇಟ್ಟುಕೊಂಡ ಈರುಳ್ಳಿ ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಅದಕ್ಕೆ ಸಣ್ಣದಾಗಿ ಕಟ್ ಮಾಡಿ ಇಟ್ಟುಕೊಂಡ ಚಿಕನ್, ಉಪ್ಪು, ಏಲಕ್ಕಿ ಹಾಕಿ 10 ನಿಮಿಷ ಬೇಯಿಸಿ. ಇದಕ್ಕೆ ಗ್ರೈಂಡ್ ಮಾಡಿ ಇಟ್ಟುಕೊಂಡ ಮಸಾಲವನ್ನು ಹಾಕಿ ಮಿಕ್ಸ್ ಮಾಡಿ ಸ್ವಲ್ಪ ಬೇಯಿಸಿ. ನಂತರ ರುಚಿಗೆ ಉಪ್ಪು ಬೇಕಿದ್ದರೆ ಹಾಕಿ ತೆಂಗಿನಕಾಯಿ ಪೇಸ್ಟ್ ನ್ನು ಹಾಕಿ ಬೇಯಿಸಿ. ಅದಕ್ಕೆ ಸ್ವಲ್ಪ ತುಪ್ಪನ್ನು ಹಾಕಿ ಬಾಯಿಯನ್ನು ಮುಚ್ಚಿ. ಇದೀಗ ಬಿಸಿ ಬಿಸಿಯಾದ ರುಚಿಕರವಾದ ಚಿಕನ್ ಸುಕ್ಕ ಸವಿಯಲು ಸಿದ್ಧ.