‘ಇಂಡಿಯನ್ ಕಸ್ಟರ್ಡ್ ಫ್ರೂಟ್ ಸಲಾಡ್’ ಹೀಗೂ ಮಾಡಬಹುದು

‘ಇಂಡಿಯನ್ ಕಸ್ಟರ್ಡ್ ಫ್ರೂಟ್ ಸಲಾಡ್’ ಹೀಗೂ ಮಾಡಬಹುದು

Feb 01, 2020 02:42:59 PM (IST)
‘ಇಂಡಿಯನ್ ಕಸ್ಟರ್ಡ್ ಫ್ರೂಟ್ ಸಲಾಡ್’ ಹೀಗೂ ಮಾಡಬಹುದು

ಐಸ್ ಕ್ರೀಂ ಅಂದ್ರೆ ಯಾರಿಗೇ ಇಷ್ಟವಿಲ್ಲ ಹೇಳಿ. ಅದರಲ್ಲಿಯೂ ಚಿಕ್ಕ ಮಕ್ಕಳಿಗಂತೂ ಅಚ್ಚು ಮೆಚ್ಚು. ಆದರೆ ಕೆಲವೊಮ್ಮೆ ಕೇವಲ ಐಸ್ ಕ್ರೀಂ ತಿಂದು ಮಕ್ಕಳು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.

ಉತ್ತಮ ಆರೋಗ್ಯಕ್ಕೆ ಫ್ರೂಟ್ ಸಲಾಡ್ ವಿತ್ ಐಸ್ ಕ್ರೀಂ ಉತ್ತಮ. ಇದು ತಿನ್ನಲು ರುಚಿಕರವಾಗಿದ್ದು, ಆರೋಗ್ಯಕ್ಕೂ ಉತ್ತಮ. ಇನ್ನೂ ಇದನ್ನು ಮನೆಯಲ್ಲಿಯೇ ತುಂಬಾ ಸಿಂಪಲ್ ಆಗಿ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು.

ಕಸ್ಟರ್ಡ್ ಫ್ರೂಟ್ ಸಲಾಡ್ ಮಾಡಲು ಬೇಕಾಗುವ ಸಾಮಾಗ್ರಿಗಳು

1/4ಕಪ್ ವೆನಿಲ್ಲಾ ಕಸ್ಟರ್ಡ್ ಪೌಡರ್
1/2ಕಪ್ ಸಕ್ಕರೆ
3ಕಪ್ ಹಾಲು
ಬಾಳೆಹಣ್ಣು, ಮಾವಿನಕಾಯಿ, ಬಾಳೆ ಹಣ್ಣು, ಚಿಕ್ಕು, ಸೇಬು, ಅನಾನಸ್ ಹಣ್ಣು

ಮಾಡುವ ವಿಧಾನ: ಒಂದು ಬೌಲ್ ನ್ನು ತೆಗೆದುಕೊಂಡು ಅದಕ್ಕೆ 1/4ಕಪ್ ವೆನಿಲ್ಲಾ ಕಸ್ಟರ್ಡ್ ಪೌಡರ್, 1/2ಕಪ್ ಸಕ್ಕರೆ ಹಾಕಿ ಸರಿಯಾಗಿ ಮಿಕ್ಸ್ ಮಾಡಿ. ಇದಕ್ಕೆ ಸ್ವಲ್ಪ ಹಾಲನ್ನು ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಉಳಿದ ಹಾಲನ್ನು ಹಾಕಿ ಮಿಕ್ಸ್ ಮಾಡಿ ಮೀಡಿಯಂ ಹೀಟ್ ನಲ್ಲಿ 3 ನಿಮಿಷ ಕಾಯಿಸಿ. ನಂತರ ಉರಿ ಆರಿಸಿ ತಣ್ಣಗಾಗಲು ಬಿಡಿ. ಆ ಬಳಿಕ ಮಿಶ್ರಣವನ್ನು ಫ್ರಿಜ್ ನಲ್ಲಿ ಇಡಿ.
ಈ ಮಿಶ್ರಣಕ್ಕೆ ಬಾಳೆಹಣ್ಣು, ಮಾವಿನಕಾಯಿ, ಚಿಕ್ಕು, ಸೇಬು ಹಣ್ಣನ್ನು ಸಣ್ಣದಾಗಿ ಕಟ್ ಮಾಡಿ ಹಾಕಿ. ಇದೀಗ ತುಂಬಾ ಕೂಲ್ ಆಗಿರುವ ಫ್ರೂಟ್ ಸಲಾಡ್ ಸವಿಯಲು ಸಿದ್ಧ.