ಕರಾವಳಿ ಶೈಲಿಯ 'ಚಿಕನ್ ಸುಕ್ಕ'

ಕರಾವಳಿ ಶೈಲಿಯ 'ಚಿಕನ್ ಸುಕ್ಕ'

YK   ¦    Sep 20, 2019 03:55:38 PM (IST)
ಕರಾವಳಿ ಶೈಲಿಯ 'ಚಿಕನ್ ಸುಕ್ಕ'

ಕರಾವಳಿಯ ಚಿಕನ್ ಖಾದ್ಯಗಳಲ್ಲಿ ಸುಕ್ಕ ತುಂಬಾನೇ ಫೇಮಸ್. ಮಧ್ಯಾಹ್ನ ಹಾಗೂ ರಾತ್ರಿ ಊಟದ ಜತೆ ಚಿಕನ್ ಸುಕ್ಕ ಸವಿಯಲು ತುಂಬಾನೇ ರುಚಿಕರವಾಗಿರುತ್ತದೆ.

 ಚಿಕನ್ ಸುಕ್ಕ ಮಾಡುವ ವಿಧಾನ

ಸಾಮಾಗ್ರಿಗಳು:

ತೆಂಗಿನ ತುರಿ

ಮೆಣಸು-15

ಚಮಚ ಕೊತ್ತಂಬರಿ-2

ಚಮಚ ಕಾಳುಮೆಣಸು-1/2

ಚಮಚ ಮೆಂತ್ಯ-½

ಬೆಳ್ಳುಳ್ಳಿ 8ಎಸಳು

ಸಣ್ಣ ಶುಂಠಿ

ಚಕ್ಕೆ ಸಣ್ಣ ಚೂರು

ಲವಂಗ 2

ಗಸಗಸೆ ½ ಚಮಚ

ಕರಬೇವು 10

ಅರುಶಿನಪುಡಿ 1 ಚಮಚ

ತೆಂಗಿನಎಣ್ಣೆ ಎರಡು ಚಮಚ1 ಕೆಜಿ ಕೋಳಿ ಮಾಂಸ

ರುಚಿಗೆ ಉಪ್ಪು 

ಮಾಡುವ ವಿಧಾನ:

ತೆಂಗಿನ ತುರಿಯನ್ನು ಚೆನ್ನಾಗಿ ಹುರಿದಿಟ್ಟುಕೊಳ್ಳಿ. ಮತ್ತೇ ಎಲ್ಲ ಮಸಾಲ ಪದಾರ್ಥಗಳನ್ನು ಹುರಿಯಿರಿ. ನಂತರ  ಎಲ್ಲ ಮಿಶ್ರಣಗಳನ್ನು ಸ್ವಲ್ಪ ನೀರು ಹಾಕಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಅದರಲ್ಲಿ 2 ದೊಡ್ಡ ಗಾತ್ರದ ನೀರುಳ್ಳಿ ಹಾಕಿ ಹುರಿಯಿರಿ. ನಂತರ ಅದಕ್ಕೆ ಕೋಳಿ ಮಾಂಸವನ್ನು ಹಾಕಿ ಬೇಯಿಸಿ.ಬೆಂದ ನಂತರ ರುಬ್ಬಿ ಕೊಂಡ ಮಸಾಲೆಯುನ್ನು ಹಾಕಿ ಕುದಿಸಿ. ಆದಾದ ಬಳಿಕ ಹುರಿದಿಟ್ಟುಕೊಂಡ ತೆಂಗಿನ ತುರಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದೀಗ ರುಚಿಕರವಾದ ಕರಾವಳಿ ಶೈಲಿಯ ಚಿಕನ್ ಸುಕ್ಕ ಸವಿಯಲು ಸಿದ್ಧ.